ಮಲಗುವ ವೇಳೆ ತಪ್ಪಿ ಕೂಡಾ ತಲೆಯ ಬಳಿ ಈ ವಸ್ತುಗಳನ್ನು ಇಟ್ಟುಕೊಳ್ಳುವುದು ಸಮಸ್ಯೆಗಳಿಗೆ ಆಮಂತ್ರಣ ನೀಡಿದಂತೆ

ರಾತ್ರಿ ಮಲಗುವಾಗ ಕೆಲವು ವಸ್ತುಗಳನ್ನು ತಲೆಯ ಬಳಿ ಇಟ್ಟುಕೊಳ್ಳುವ ಅಭ್ಯಾಸ ನಮಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿ ಮಲಗುವ ವೇಳೆ, ಕೆಲವು ವಸ್ತುಗಳನ್ನು ನಿಮ್ಮ ತಲೆಯ ಬಳಿ ಇಟ್ಟುಕೊಂಡು ಮಲಗುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ.

Written by - Ranjitha R K | Last Updated : Aug 5, 2021, 01:50 PM IST
  • ಮಲಗುವ ವೇಳೆ ತಲೆಯ ಬಳಿ ಯಾವತ್ತು ಇಡಬೇಡಿ ಈ ವಸ್ತುಗಳನ್ನು
  • ಮಲಗುವಾಗ ತಪ್ಪಿಯೂ ತಲೆಯ ಬಳಿ ಇಡಬೇಡಿ ಪರ್ಸ್
  • ರಾತಿ ಕನ್ನಡಿ ನೋಡವ ಅಭ್ಯಾಸ ಒಳ್ಳೆಯದಲ್ಲ
ಮಲಗುವ ವೇಳೆ ತಪ್ಪಿ ಕೂಡಾ ತಲೆಯ ಬಳಿ ಈ ವಸ್ತುಗಳನ್ನು ಇಟ್ಟುಕೊಳ್ಳುವುದು ಸಮಸ್ಯೆಗಳಿಗೆ ಆಮಂತ್ರಣ ನೀಡಿದಂತೆ title=
ಮಲಗುವ ವೇಳೆ ತಲೆಯ ಬಳಿ ಯಾವತ್ತು ಇಡಬೇಡಿ ಈ ವಸ್ತುಗಳನ್ನು (photo zee news)

ನವದೆಹಲಿ : ವಾಸ್ತುಶಾಸ್ತ್ರವು ನಮ್ಮ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರುತ್ತದೆ. ಇವುಗಳಲ್ಲಿ ಕೆಲವು ನಮ್ಮ ಮೇಲೆ ಧನಾತ್ಮಕ ಪರಿಣಾಮದ ಬಗ್ಗೆ ಹೇಳಿದರೆ, ಇನ್ನುಕೆಲವು ವಿಷಯಗಳು ನಕಾರಾತ್ಮಕ ಪರಿಣಾಮದ ಬಗ್ಗೆ ಸೂಚನೆ ನೀಡುತ್ತದೆ. ದಿನದ ಆರಂಭದಿಂದ ದಿನದ ಅಂತ್ಯದವರೆಗೆ ನಾವು ನಡೆದುಕೊಳ್ಳಬೇಕಾದ ರೀತಿ ನೀತಿಯ ಬಗ್ಗೆ ವಾಸ್ತು ತಿಳಿಸಿಕೊಡುತ್ತದೆ. ವಾಸ್ತು ಶಾಸ್ತ್ರವನ್ನು (Vastu Shastra) ನಂಬುವುದಾದರೆ, ಈ ನಿಯಮಗಳನ್ನು ಅನುಸರಿಸಿಕೊಂಡರೆ ಉತ್ತಮ ಫಲಗಳು ಸಿಗಬಹುದು.   

ರಾತ್ರಿ ಮಲಗುವಾಗ ಕೆಲವು ವಸ್ತುಗಳನ್ನು ತಲೆಯ ಬಳಿ ಇಟ್ಟುಕೊಳ್ಳುವ ಅಭ್ಯಾಸ ನಮಗಿರುತ್ತದೆ. ವಾಸ್ತು ಶಾಸ್ತ್ರದ  (Vastu Shastra) ಪ್ರಕಾರ, ರಾತ್ರಿ ಮಲಗುವ ವೇಳೆ, ಕೆಲವು ವಸ್ತುಗಳನ್ನು ನಿಮ್ಮ ತಲೆಯ ಬಳಿ ಇಟ್ಟುಕೊಂಡು ಮಲಗುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ. ಹೀಗೆ  ಮಾಡುವುದರಿಂದ ಜೀವನದಲ್ಲಿ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ : Vastu Tips: ಈ ಎಲ್ಲಾ ಲಾಭಗಳಿಗಾಗಿ ಊಟ ಮುಗಿಸಿದ ಮೇಲೆ ಪ್ರತಿದಿನ ಸೇವಿಸಿ ಕಲ್ಲು ಸಕ್ಕರೆ

ಮಲಗುವ ವೇಳೆ ಈ ವಸ್ತುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಡಿ : 
ಎಲೆಕ್ಟ್ರಾನಿಕ್ ವಸ್ತುಗಳು : ಮೊಬೈಲ್ ಫೋನ್ (Mobile phone) , ವಾಚ್, ಫೋನ್, ಲ್ಯಾಪ್ ಟಾಪ್ ನಂತಹ (Laptop) ಎಲೆಕ್ಟ್ರಾನಿಕ್ ವಸ್ತುಗಳನ್ನು ಯಾವತ್ತೂ ತಲೆ ಯ ಬಳಿ ಇಟ್ಟುಕೊಳ್ಳಬಾರದು. ಈ ವಸ್ತುಗಳು ಯಾವುದೇ ಸಮಯದಲ್ಲಿ ಸ್ಫೋಟಗೊಳ್ಳಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಈ ವಸ್ತುಗಳು ಜೀವನದಲ್ಲಿ ಋಣಾತ್ಮಕ ಪರಿಣಾಮವನ್ನು ಬೀರಬಹುದು. 

ಪುಸ್ತಕಗಳು : ಪುಸ್ತಕಗಳು, ಪತ್ರಿಕೆಗಳು ಅಥವಾ ಕಾಪಿ-ರಿಜಿಸ್ಟರ್‌ಗಳಂತಹ ವಸ್ತುಗಳನ್ನು ಸಹ ಮಲಗುವ ವೇಳೆ, ತಲೆಯ ಬಳಿ  ಇಡಬಾರದು. ವಾಸ್ತು ಪ್ರಕಾರ (Vastu tips), ಈ ಎಲ್ಲಾ ವಸ್ತುಗಳು ವ್ಯಕ್ತಿಯ ಜೀವನದಲ್ಲಿ ಋಣಾತ್ಮಕ ಪರಿಣಾಮವನ್ನು ಬೀರುತ್ತವೆ.

ಪರ್ಸ್ : ಅನೇಕರಿಗೆ ರಾತ್ರಿ ಮಲಗುವ ವೇಳೆ ತಮ್ಮ ಪರ್ಸ್ (Wallet) ಅನ್ನು ತಲೆಯ ಬಲಿ ಇಟ್ಟುಕೊಂಡು ಮಲಗುವ ಅಭ್ಯಾಸ ವಿರುತ್ತದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಹೀಗೆ ಮಾಡುವುದರಿಂದ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಎದುರಾಗಬಹುದು. 

ಇದನ್ನೂ ಓದಿ : Astrology: ಈ ನಾಲ್ಕು ರಾಶಿಯವರಿಗೆ ಉದ್ಯೋಗ ಸೇರಿದಂತೆ ಈ ಎಲ್ಲಾ ವಿಷಯಗಳಲ್ಲಿ ಶುಭ ಫಲ ನೀಡಲಿದೆ ಬುಧಾದಿತ್ಯ ಯೋಗ

ನೀರು : ಅನೇಕ ಜನರು ಮಲಗುವಾಗ ನೀರಿನ ಬಾಟಲಿಯನ್ನು (Water bottle) ತಲೆಯ ಪಕ್ಕ ಇಟ್ಟುಕೊಂಡು ಮಲಗುತ್ತಾರೆ. ವಾಸ್ತು ಪ್ರಕಾರ, ಹೀಗೆ ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ಇದು ಜಾತಕದಲ್ಲಿ ಚಂದ್ರನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕನ್ನಡಿ: ತಲೆಯ ಕನ್ನಡಿ ಬಳಿ ಇಡುವುದನ್ನು ಕೂಡಾ ತಪ್ಪಿಸಿಕೊಳ್ಳಬೇಕು. ವಾಸ್ತು ಪ್ರಕಾರ, ಮಲಗುವಾಗ ನಿಮ್ಮ ನೆರಳು ಕನ್ನಡಿಯಲ್ಲಿ ಕಾಣಿಸಬಾರದು. ಮಲಗಿರುವ ವೇಳೆ  ನಿಮ್ಮ ಪ್ರತಿಬಿಂಬ ಕನ್ನಡಿಯಲ್ಲಿ ಕಂಡರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತದೆಯಂತೆ. 

ಔಷಧಗಳು: ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿ ಮಲಗುವ ವೇಳೆ, ತಲೆಯ ಸಮೀಪ ಔಷಧಿಯನ್ನು ಇಟ್ಟುಕೊಂಡು ಮಲಗಬಾರದು. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒಂದು ವೇಳೆ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ,  ಔಷಧಿ ನೀಡಿದ ಬಳಿಕ ಅದನ್ನು ದೂರ ಸರಿಸಿ.

ಇದನ್ನೂ ಓದಿ :  Vastu Tips : ಮನೆಯ ಮುಖ್ಯ ದ್ವಾರಕ್ಕೆ ಕುಂಕುಮ ಇಡುವುದು ಶುಭ : ಯಾಕೆ ಕಾರಣ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News